FLASH NEWS

FLASH NEWS:**************ನಮ್ಮ ಶಾಲೆಯ ಬ್ಲೋಗ್ ನ್ನು ಸಂದರ್ಶಿಸಿರುವುದಕ್ಕೆ ಧನ್ಯವಾದಗಳು.ಕ್ಷಮಿಸಿ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ನಮ್ಮ ಶಾಲೆಯ ಬ್ಲೋಗ್ ಇನ್ನು ಮುಂದೆ http://11018ghsspaivalikenagar.blogspot.in/ ಎಂಬ ವಿಳಾಸದಲ್ಲಿ ಲಭ್ಯವಿರುವುದು. ಸಂದರ್ಶಕರ ಸಹಕಾರವನ್ನು ನಾವು ಬಯಸುತ್ತೇವೆ**************നമ്മുടെ ബ്ലോഗ് സംദര്ശിച്ചുകൊണ്ടിരുന്നതിന് നന്തി. ചില കാരണങ്കളാല് നമ്മുടെ സ്കൂളിന്റെ ബ്ലോഗ് ഇനിമുതല് http://11018ghsspaivalikenagar.blogspot.in/ എന്ന അഡ്രസ്സില് ലഭ്യമാകും. സംദര്ശകരുടെ സഹകരണം അഭ്യര്ഥിക്കുന്നു***********Thank you for visiting our blog. Due to some technical problems our continued service will be availabe in url http://11018ghsspaivalikenagar.blogspot.in/ we expecting your co operation

ಪ್ರತಿಭಾ ತರಂಗ



ಅವಕಾಶಗಳನ್ನು ಒದಗಿಸಿಕೊಟ್ಟರೆ ಪ್ರತಿಭೆಗಳು ಬೆಳಕಿಗೆ ಬರುತ್ತವೆ.
 ಆರೋಗ್ಯಕರ ಸ್ಪರ್ಧೆಗಳು ಪ್ರತಿಭೆಗಳ ಬೆಳವಣಿಗೆಗೆ ಸಹಕಾರಿ.


-->


ಬಾ ಬಾ ಹಕ್ಕೀ...
ಬಾ.. ಬಾ..ಹಕ್ಕೀ||||
ಅಂದದ ಹಾಡನ್ನು ಹೇಳು|||| ಬಾ..ಬಾ||
ರೆಕ್ಕೆಯ ಬಿಚ್ಚಿ ಬಾನಲಿ ಹಾರುತ್ತಾ ಬಾ ಹಕ್ಕಿ
ಅಂದದ ಹಾಡನ್ನು ಹೇಳು||||ಬಾ..ಬಾ||
ಹಾರುತ್ತಾ ಬಂದು ಮನವಾ ತನಿಸಲು ಹಕ್ಕಿ
ಅಂದದ ಹಾಡನ್ನು ಹೇಳು||||ಬಾ..ಬಾ..||


ರಚನೆ
ಅಕ್ಷತ.ಕೆ ೫.





-->
ಕಾಟ ಪಾಠ

ಅನ್ಯರಿಗೆ ಕೊಡಬೇಡಿ ಕಾಟ.
ಆಡಬೇಡಿ ಮೋಸದ ಆಟ.
ಒಂದು ಬೆರಳು ತೋರಿಸಿದರೆ ಪರರಿಗೆ.
ಮೂರು ಬೆರಳು ತೋರಿಸುವುದೆಮಗೆ.
ಇಂದು ಮಾಡಿದ ಅನ್ಯಾಯದ ಫಲ.
ಅನುಭವಿಸಿ ತೀರುವೆ ಎನ್ನೋದು ಸುಳ್ಳಲ್ಲ.
ನೆನಪಿಡೋಣ ಈ ಪಾಠ.
ಕೊನೆಗೊಳಿಸೋಣ ಕುಚೇಷ್ಠೆಯ ಪರಿಪಾಠ.  

ಹರಿಣಾಕ್ಷಿ  
೯ಸಿ


-->
ನಮ್ಮ ಪರಿಸರ

          ಮನುಷ್ಯ ಆದಿಯಿಂದಲ್ಲ ಪ್ರಕೃತಿಯ ಮೇಲೆ ಸವಾರಿ ಮಾಡುತ್ತಾ ಬಂದಿದ್ದಾನೆ ಆಧುನಿಕ ಯುಗದಲ್ಲಿ ಮಾನವನು ಪರಿಸರದ ಮೇಲೆ ಮಾಡುವ ದೌರ್ಜನ್ಯಗಳು
ಇನ್ನಷ್ಟು ಹೆಚ್ಚಿ ದೆ. ಆಧುನಿಕಜೀವನ ವಿಧಾನಗಳಿಂದ ಜೀವನ ಮೌಲ್ಯಗಳು
ಬದಲಾಗಿದ್ದು ಪರಿಸರ ಪ್ರಜ್ಞೆಯು ಮರೆಯಾಗುತ್ತಿದೆ. ಪರಿಸರವನ್ನು ಹಾಳು ಮಾಡದೆ ನಗರ ಬೆಳೆಯಲಾಗದು ಎ೦ಬುದು ಸತ್ರ.ಕಾರ್ಖಾನೆಗಳ ಹೊಗೆ,ಕಲುಶಿತನೀರು.ಕೃಷಿಯಲ್ಲಿ ಕೀಟನಾಶಕಗಳ ಹಾಗು ರಾಸಯನಿಕ ಗೊಬ್ಬರಗಳ ಬಳಕೆ,ಪ್ಲಾಸ್ಟಿಕ್ ಬಳಕೆ,ವಾಹನಗಳ ಬಳಕೆ ಆತಿಯಾದ ಜನಸಂಖ್ಯೆ ಎಲ್ಲವು ಪರಿಸರ ನಾಶಕ್ಕೆ ಕಾರಣ ವಾಗಿದೆ. ಜನರು ಉದ್ಯೋಗವನ್ನು ಅರಸುತ್ತಾ ಹಳ್ಳಿಯಿಂದ ಪಟ್ಟಣದತ್ತ ವಲಸೆ ಬಂದು ಗ್ರಾಮ್ಯ ಸಂಸ್ಕ್ರತಿಯನ್ನು ಮರೆತು ಪಟ್ಟಣದ ಸಂಸ್ಕ್ರತಿಯೇ ಶ್ರೇಷ್ಠ ಎ೦ದು ತಿಳಿದಿದ್ದಾರೆ.ನಮ್ಮ ಪರಂಪರೆಯ ಸಂಸ್ಕ್ರತಿ ಹಾಗು ಜನಪದ ಸಂಸ್ಕ್ರತಿಗಳಲ್ಲಿ ಹೇಳಿದಂತೆ ಪರಿಸರವನ್ನು ಗೌರವಿಸುತ್ತಾ ಕೃತಜ್ಞತಾ ಭಾವದಿಂದ ಪರಿಸರ ಸ್ನೇಹಿಯಾಗಿ ಬಾಳಿದರೆ ಎಲ್ಲರಿಗೂ ಒಳಿತು. ಪರಿಸರ ಉಳಿದರೆ ನಾವು ಉಳಿದೇವು ಎ೦ಬ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. 

 ಆಯಿಷಾಬಾನು .ಕೆ 
 ೧೦ ಸಿ






-->
ಹೂಬನ

ನೀರನು ಹನಿಸುತ

ಹೂಗಿಡ ಬೆಳೆಸುತ

ಬನವನು ಸುಂದರಗೊಳಿಸೋಣ

ಚಿಗುರುವ ಗಿಡಗಳ

ಅರಳಿಹ ಸುಮಗಳು

ಕಾಣುವ ನಾವು ನಲಿಯೋಣ

ಡೇಲಿಯ -ಸೇವಂತಿ

ಹೊಳೆಯುವ ಕಾಂತಿ
ಚೆಲುವನು ನೋಡಿರಿ ಎನ್ನೋಣ

ಕೆಂಡ ಸಂಪಿಗೆ

ಕೇದಿ ಮಲ್ಲಿಗೆ
ಘಮ ಘಮ ಪರಿಮಳ ಪಡೆಯೋಣ

ಮಕರಂದವ ಸವಿಯುವ

ದುಂಬಿಯ ಚೆಲುವ
ನೋಡುತ ನಾವೇ ತಣಿಯೋಣ

ಅಂದದ ಚಂದದ

ಚೆಲುವಿನ ಬಣ್ಣದ

ಪಾತರಗಿತ್ತಿಯ ನೋಡೋಣ



ಅಪಿ೯ತ
IX.ಡಿ ತರಗತಿ



  -->
                    ಪ್ಲಾ ಸ್ಟಿಕ್ ಪ್ಲಾ ಸ್ಟಿಕ್ ಪ್ಲಾ ಸ್ಟಿಕ್



              ಪ್ಲಾ ಸ್ಟಿಕ್ ಒಂದು ವಿಷಪೂರಿತ ವಸ್ತುವಾಗಿದೆ.ಇದರಿಂದ ಪರಿಸರವು ಮಲಿನಗೊಳ್ಳುತ್ತದೆ.ಹೇಗೆಂದರೆ ಪ್ಲಾ ಸ್ಟಿಕ್
ಮಣ್ಣಿನಲ್ಲಿ ಕರಗುದಿಲ್ಲ.ಪ್ಲಾ ಸ್ಟಿಕ್ ನಲ್ಲಿ ಮಳೆಗಾಲ ಬರುವಾಗ ನೀರು ತುಂಬುವುದು ಸಹಜ.ಇದರಲ್ಲಿ
,ಸೊಳ್ಳೆ, ,ನೊಣಗಳಂತಹ ಕೀಟಗಳು ಮೊಟ್ಟೆಯಿಡುತ್ತದೆ.ಇದರಿಂದ ಮಾನವರಾದ ನಮಗೆ ಹಲವು ರೋಗಗಳು
ಹರಡುತ್ತದೆ.
ಈಗ ಎಲ್ಲಾ ಮಾಕೆ೯ಟ್,ಅಂಗಡಿಗಳಲ್ಲಿ ಹೆಚ್ಚಾಗಿ ಬಳಸುವು ಪ್ಲಾ ಸ್ಟಿಕ್ .ಇದರಲ್ಲಿರುವ ತೊಂದರೆಗಳನ್ನು ಯಾರು
ಅರಿಯುದಿಲ್ಲ.ಇನ್ನಾದರು ನಾವು ಪ್ಲಾ ಸ್ಟಿಕ್ ನಿಂದ ಸರಿಯೋಣ


ಪ್ಲಾ ಸ್ಟಿಕ್ ತ್ಯಜಿಸೋಣ ಪರಿಸರ ಉಳಿಸೋಣ”




-->
ದೀಪಾವಳಿ


ದೀಪದಿಂದ ದೀಪವ ಬೆಳಗಿಸುವ

ಮನೆಯೆಲ್ಲ ಸಡಗರ ಹಂಚುವ

ಊರೆಲ್ಲವನ್ನು ದೀಪದಿಂದ ಅಲಂಕರಿಸುವ

ಬಂದಿತು ದೀಪಾವಳಿ..........

ಜೀವನದ ನೋವುಗಳ ಮರೆಯುವ ದಿನ
ಕತ್ತಲ ಮನೆಗೆ ಬೆಳಕು ತರುವ ದಿನ

ಎಲ್ಲರೂ ಸಂತಸದಿಂದಿರುವ ದಿನ

ವಷ೯ಕೊಮ್ಮೆ ಬರುವ ದೀಪಾವಳಿ ದಿನ

ಸಿಹಿ,ತಿಂಡಿ,ಸಿಡಿ ಮದ್ದುಗಳ ಮಜ
ಮಕ್ಕಳಿಗೆ ಅ ದಿನ ಶಾಲೆಗಳ ರಜಾ

ದೀಪಾವಳಿಯ ದಿನ ಎಲ್ಲರಿಗೂ ಸಡಗರ

ಆ ಸಡಗರ ಎಲ್ಲಾ ವರುಷವಿರಲಿ ಅಮರ

ಕೆಲವೊಮ್ಮೆ ಪಟಾಕಿ ತರುವುದು ಕಹಿ ಕಹಿ ನೋವು

ಅದಕ್ಕೆ ಹೇಳುವರು ಇದು ದೀಪದ ಹಾವಳಿ

ನಾವೆಲ್ಲ ಕೈ ಮುಗಿದು ಬೇಡುವ ದೇವರಲಿ

ಆ ದಿನ ಆಗಲಿ ಕೇವಲ ಸಂತಸದ ದೀಪಾವಳಿ




ಸ್ವಾತಿ .ಯಸ್
VIII ಎ ತರಗತಿ




-->
ಗಿಳಿ



ಅಂದದ ಚಂದದ

ಹಸುರಿನ ಬಣ್ಣದ

ಗಿಳಿಯೇ ಬಾ ಬಾ ಬಾ

ಮುದ್ದಿನ ಮಾತನು

ಆಡುತ ನೀನು

ಮಕ್ಕಳ ಮಗಿಸುತ ಬಾ ಬಾ ಬಾ

ಹಣ್ಣು - ಹಂಪಲು

ಎಳೆಯ ತಂಬೂಲ

ಮೆಲ್ಲಲು ನೀ ಬಾ ಬಾ ಬಾ

ಜಿಗಿ ಜಿಗಿದಾಡುತ್ತಾ

ಎಲ್ಲೆಡೆ ಸುತ್ತುತ

ಕಣ್ಮನ ತಣಿಸಲು ಬಾ ಬಾ ಬಾ

ಕಾಳನು ತಿನ್ನುವ
ಹಷ೯ದಿ ಹಾರುತ

ಸಂತಸ ನೀಡಲು ಬಾ ಬಾಬಾ

ವಿಜಯ ಲಕ್ಷಿ
IX .ಡಿ ತರಗತಿ




-->
ಈರುಳ್ಳಿಕಥೆ



             ಈರುಳ್ಳಿ,ಟೊಮೆಟೊ ಹಾಗೂ ಬಟಾಟೆಯು ತುಂಬಾ ಒಳ್ಳೆಯ ಗೆಳೆತಿಯರಾಗಿದ್ದರು.ಹೀಗೆ ಒಂದು
 
ದಿವಸ ಅವರು ಪೇಟೆಯನ್ನು ಸುತ್ತಲೂ ಹೋದರು.ಅಗ ಅಲ್ಲಿ ಮಾಗ೯ ದಾಟುವಾಗ ಒಂದು ಲಾರಿಯ ಚಕ್ರದಲ್ಲಿ

ಸಿಲುಕಿಟೊಮೆಟೊ ಸಾಯುತ್ತಾಳೆ.ಅಗ ಇಬ್ಬರು ಗೆಳೆಯರು ಅಲ್ಲಿಯೇ ಕೂಗುತ್ತಾರೆ.ಅಲ್ಲಿಂದ ಬಸ್ಸನಲ್ಲಿ ಬಂದು ,

ಬಸ್ಸಿನಿಂದ ಇಳಿದು ರಸ್ತೆದಾಡುವಾಗ ಒಂದು ಕಾರು ಬಂದು ಬಟಾಟೆ ಮೇಲೆಯೋಗಿ ಬಟಾಟೆ ಸಾಯುತ್ತಾಳೆ.ಆಗ

ಅವಳು ಆಳುತ್ತಾ ದೇವರಲ್ಲಿ ಬೇಡಿ ಹೀಗೆಂದಳು “ಟೊಮೆಟೊ ಸತ್ತಾಗ ನಾನು ಮತ್ತು ಬಟಾಟೆ ಕೂಗಿದೆವು.ಬಟಾಟೆ

ಸತ್ತಾಗ ನಾನು ಕೂಗಿದೆನು. ಆದರೆ ನಾನು ಸತ್ತಾಗ ಯಾರು ಕೂಗುವುದು? ”oದು ಕೇಳಿತು.”ಅಗ ದೇವರು

ಹೇಳಿದರು ಹೆದರಬೇಡ ಕಾರಣ ನಿನ್ನನ್ನು ಸಾಯಿಸುವವರು ಆಳುತ್ತಾರೆ “ ಎoದು ಹೇಳಿದಳು.ಆದುದರಿ0ದ ಈರುಳ್ಳಿ

ತುಂಡರಿಸುವಾಗ ಜನ ಕಣ್ಣೀರು ಹಾಕೂದು ಆಗಿದೆ.



ಚಂದನ
VIII



-->
ಎತ್ತಿನ ಗಾಡಿ
ಊರಿನ ಬೀದಿಯ ನೋಡಿರಿ ಚಿನ್ನರೆ.
ಎತ್ತಿನ ಗಾಡಿಯು ಸಾಗುತಿದೆ.
ಬಂಡಿಯನೆಳೆಯುವ ಎತ್ತಿನ ಕೊರಳಿನ.
ಕಿಂಕಿಣಿ ನಾದವು ಕೇಳಿಸಿದೆ.
ಪ್ರೀತಿಯ ತೋರುವ ಪ್ರಾಣಿಗಳೆಳೆಯುವ
ಚಕ್ರದ ಗಾಡಿಯ ಇದು ಅಹುದು
ಇಂಧನ ಬಯಸುವ ಬಸ್ಸನು,ಕಾರನು
ಮೀರುವ ಯೋಗ್ಯತೆ ಇದಕಿಹುದು
ಪಯಣವ ಮಾಡಲು,ಸರಕನು ಒಯ್ಯಲು
ಉತ್ತಮ ವಾಹನ ಈ ಗಾಡಿ.
ಹೊಗೆಯನು ಉಗುಳದ,ಗದ್ದಲ
ಪರಿಸರ ಸ್ನೇಹಿಯು ಇದು ನೋಡಿ


ಹರಿಣಾಕ್ಷಿ
೯ಸಿ





  -->
ಬಹು ದುಡಿಮೆ


ದುಡಿಯಿರಿ ದುಡಿಯಿರಿ
ಬೆಳೆಯಿರಿ ಬೆಳೆಯಿರಿ
ಬಹು ಸಂತಸದ ||||

ಕಷ್ಟವ ಪಟ್ಟು
ಬೆವರನು ಸುರಿಸಿ
ಸೇವಿಸಿ ಶುಧ್ದದ ಆಹಾರ||||

ಕಷ್ಟವ ಪಟ್ಟು
ಇಷ್ಟವ ತೆಗೆದು
ಬಾಳಿರಿ ಬಹುಸಂತಸದಿ ||||

ಕಷ್ಟವ ಪಡೆಯಿರಿ
ವ್ಯಾಯಾಮ ಮಾಡಿರಿ
ಬಹು ಸಂತಸದಿ ||||

ರೋಗವ ದೋಡಿ
ಆರೋಗ್ಯವಾಗಿ ಬಾಳಿರಿ ನೀವು
ಬಹು ಸಂತಸದಿ||||



ನಫೀಸತ್ ಅಫ್ರೀದ
6c




  -->
ರಾಮುವಿನ ಗುರಿ



          ಒಂದುರಿನಲ್ಲಿ ಮಹೇಶ್ ಮತ್ತು ಲಕ್ಷ್ಮಿ ಎಂಬ ಬಡ ದಂಪತಿಗಳಿದ್ದರು.
ಆ ದಂಪತಿಗೆ ಒಬ್ಬ ಮುದ್ದು ಮಗನಿದ್ದನು.ಅವನ ಹೆಸರು ರಾಮು. ರಾಮುವು ೧೦ನೇ ಕ್ಲಾಸಿನಲ್ಲಿ ಕಲಿಯುತ್ತಿದ್ದಾನೆ. ರಾಮುವಿಗೆ ಒಬ್ಬಳು ತಂಗಿ ಇದ್ದಳು. ಆದರೆ
ರಾಮುವು ಅವನ ತಂಗಿಯನ್ನು ಒಂದು ಬಸ್ಸು ಅಪಘಾತದ ಮೂಲಕ ಕಳಕೊಂಡ. ರಾಮುವಿನ ತಂಗಿಯನ್ನು ರಕ್ಷಿಸಲು ಆ ಗ್ರಾಮದಲ್ಲಿ ಒಂದು ಆಸ್ಪತ್ರೆಯು ಇರಲಿಲ್ಲ. ಅಂದಿನಿಂದ ರಾಮುವು ತಾನು ಕಲಿತು ಡಾಕ್ಟರ್ ಆಗಿ ಆ
ಗ್ರಾಮದಲ್ಲಿ ತನ್ನ ತಂಗಿಯ ಹೆಸರಿನಲ್ಲಿ ಒಂದು ಆಸ್ಪತ್ರೆಯನ್ನು ಕಟ಼್ಬೇಕೆಂದು
ತುಂಬಾ ಆಸೆ ಪಟ್ಟನು. ಆದರೆ ಅವನ ತಂದೆ,ತಾಯಿ ರಾತ್ರಿ ಹಗಲು ಕಷ್ಟಪಟ್ಟು
ದುಡಿದುದು ಮೂರು ಹೊತ್ತಿನ ಊಟಕ್ಕೆ ಸಾಲುತ್ತದೆ. ಹೀಗಿರುವಾಗ ಹೇಗಾದರು
೧೦ನೇ ತರಗತಿಯವರೆಗೆ ಕಲಿಸಬೇಕೆಂದು ತೀಮಾನಿಸಿದರು. ರಾಮುವು ಹರಕು ಬಟ್ಟೆಯನ್ನು ಹಾಕಿ ಶಾಲೆಗೆ ಬರುತ್ತಿರುವಾಗ ಕೆಲವರು ದಿನನಿತ್ಯವೂ ತಮಾಷೆ ಮಾಡುತ್ತಿದ್ದರು. ಆದರೆ ಇದನ್ನು ಯಾವುದನ್ನು ತಲೆ ಕೆಡಿಸದೆ ರಾತ್ರೀ,ಹಗಲು ಚೆನ್ನಾಗಿ ಓದಿ ಕಲಿತನು. ಪರೀಕ್ಷೆಯಲ್ಲಿ ಮೊದಲ ಅಂಕ ಪಡೆದನು. ಒಂದು ದಿನ
ರಾಮುವು ಶಲೆಯಿಂದ ಮನೆಗೆ ಬರುತ್ತಿರುವಾಗ ಒಂದು ಮಗುವು ದಾರಿ ತಪ್ಪಿ
ಬಂದು ದಾರಿಯ ಮಧ್ಯದಲ್ಲಿ ನಿಂತಿತ್ತು. ತಕ್ಷಣವೇ ಆ ಮಾಗದಲ್ಲಿಯಾಗಿ ಒಂದು
ಬಸ್ಸು ಬಂತು. ಅಲ್ಲಿಯೇ ಮಗುವು ನಿಂತಿದೆ. ಇದನ್ನು ಕಂಡ ರಾಮುವಿಗೆ ತನ್ನ
ಬಾಲ್ಯದ ತಂಗಿಯ ಮರಣವು ನೆನಪಾಯಿತು. ತಕ್ಷಣ ಆ ಮಗುವನ್ನು ಬಸ್ಸು ಅಪಘಾತದಿಂದ ರಕ್ಷಿಸಿದನು. ನಂತರ ಆ ಮಾಗದಲ್ಲಿಯಾಗಿ ನನ್ನ ಮಗೂ,ನನ್ನ ಮಗೂ ಎಂದು ಹೇಳುತ್ತ ರಾಮುವಿನ ಹತ್ತಿರ ಬಂದು ಆ ಮಗುವನ್ನು ಎತ್ತಿಕೊಂಡರು ಅವರು ತುಂಬಾ ಶ್ರೀಮಂತರಾದರು.






  -->
ಹಾಜ್ಜ ಲು

            ದೀನನಾಗಿ ಮೊರೆಯಿಡುವಂತಿದ್ದ ಹಾಲಜ್ಜನ ಮಾತಿಗೆ ಪಾಂಡುವಿಗೆ ಉತ್ತರಿಸಲಾಗಲಿಲ್ಲ.ಪಾಂಡು ಹಾಲಜ್ಜ ಹೇಳಿದನ್ನು ಯೋಚಿಸಿದನು.ಕಾಡಲ್ಲಿ ಎಲ್ಲರು ಸೇರಿ ಒಂದು ಸಭೆ ಸೇರಿದರು.ಆಗ ಒಬ್ಬ ಹೇಳಿದ.'ಮರ ಕಡಿಯದಿಕರಿ.ನಾವು ಮನೆ ಕಟ್ಟುದು ಹೇಗೆ ಮನೆಗೆ ಬಾಗಿಲು ಕಿಟಿಕಿ ಮೇಜು ಮಾಡುದು ಹೇಗೆ ? ' ಪಾಂಡುವಿಗೆ ಈ ಉತ್ತರ ಸರಿಯೆನಿಸಿತೂಡಗಿತು.ಆಗ ಹಾಲಜ್ಜ ಬೇಡ ಮರ ಕಡಿಯುದು ಬೇಡ ನಮ್ಮ ಉಪಕಾರ ಇನ್ನೂಬ್ಬರಿಗೆ ತೂಂದರೆ ಕೂಡುವುದು ಸರಿಯಲ್ಲ ಪಾಂಡುವಿಗೆ ಏನು ಮಾಡುದು ಎ೦ದು ತೋಚದೆ ಪುನಃ ನಾಳೆ ಸಭೆ ಸೆರಲು ಆದೇಶಿಸುತ್ತಾನೆ.ಕೂನೆಗೆ ಅವನು ಒಂದು ನಿಧಾ೯ರಕ್ಕೆ ಬರುತ್ತಾನೆ.ಒಳ್ಳೆಯ ತೀಪನ್ನು ಕೂಡುವನೆಂದು ಹಾಲಜ್ಜನಿಗೆ ನಿಶ್ಚಯಿಸುತ್ತಾನೆ.ಪಾಂಡು ಒಳ್ಳೆಯ ತೀಪನ್ನು ಕೂಡುತ್ತಾನೆ.ಎಲ್ಲರು ಸಂತೋಷದಿಂದ ಮನೆಗೆ ಸೇರುತ್ತಾರೆ.
ಶ್ರುತಿ
9c




ಕನ್ನಡ
ಕನ್ನಡವೆಂಬುದು ಕನಾ೯ಟಕದ ಭಾಷೆ
ಆದರೆ ಆಗಿರುದು ಇದು ಇಲ್ಲಿ ಪರಭಾಷೆ
ಎತಹ ಸುಂದರ ಕನ್ನಡ ಪದಗಳು
ನಿರಂತರ ವಣಿ೯ಸುವರೆಲ್ಲಾ ಕವಿಗಳು
ಕನ್ನಡವೆಂಬುದು ಅದ್ಲ್ಭುತ ಭಾಷೆ
ಓಮ್ಮೆ"ಆಡಿದರು”ಇನ್ನೂಮ್ಮೆ"ಆಡುವ”ಆಸೆ
ಪರಮಾತ್ಮನೆ”

ಸುಶ್ಮಿತ
9a




-->
ನಂಬಿಕೆ - ಸಂದೇಹ
ನಂಬಿಕೆಗಿಂತ ಸಂದೇಹವೇ ಹೆಚ್ಚಾದರೆ.
ಯಾವ ಸಂಬಂಧವೂ
ಉಳಿಯಲ್ಲ










ಪ್ರತಿಭಾ ತರ೦ಗ - ೧೩/೦೯/೨೦೧೨






ಕಥೆ:ನಿಶಿತ . ಪಿ   ೯ ಎ                                                         
           ನಿಷೆಯಿಂದಉಷೆಗೆ                           



ಅದೊಂದು ಪ್ರಶಾಂತವಾದ ಮುಂಜಾನೆ.ಮಳೆ ಹನಿಗಳ ಅಭ೯ಟಕ್ಕೆ ಮುದುಡಿ ಕುಳಿತಿರುವ ಹೂಗಳು,ಮಳೆಯಲ್ಲಿ ಕೋಪವೆಂಬಂತೆ ರಭಸವಾಗಿ ಬೀಸುತ್ತಿರುವ ಗಾಳಿಯು, ಇದನ್ನೆಲ್ಲ ವೀಕ್ಷಿಸುತ್ತಾ
ಶಾಂತಿಯು ತನ್ನ ಮನದಲ್ಲಿ ಏನೇನೋ ಯೋಚಿಸುತ್ತಾ ಇದ್ದಳು. ''ಅಮ್ಮಾವ್ರೇ ಇವ್ತು ಭಾರೀ ಮಳೆ ಬರ್ತ ಇದೆ. ನಾ ಬೇರೆ ಕೊಡೆ ತರ್ರಿಲ್ಲ. ನಾ ಹೆಂಗೆ ಮನ್ಗೆಗ್ಹೋಗೋದು.'' ಕೆಲಸದಾಕೆ ಕ್ಷಿಣವಾದ ಸ್ವರದಲ್ಲಿ. '' ನೀನಿಂದು ಇಲ್ಲೇ ಇರು. ನಾಳೆ ಹೋಗುವಿಯಂತೆ. '' ಎಂದಾಗ ಅವಳು '' ಆಯ್ತು ಅಮ್ಮಾವ್ರೆ ನಾಳೆನೇ ಓಗ್ತಿನಿ.'' ಎ೦ದು ಒಳ ನಡೆದಳು. ಶಾಂತಿಯು ಪುನ ತನ್ನ ಹಳೆ ಕಹಿ ನೆನಪಿನಲ್ಲಿ ಸಾಗಿದಳು.
ಗಂಗಾರತ್ನ ಕುಸುಮ ದಂಪತಿಗಳ ಏಕೈಕ ಪುತ್ರಿಯೆ ಶಾಂತಿ. ಅವರದು
ಕಡು ಬಡತನದಿಂದ ಕೂಡಿದ ಜೀವನವಾಗಿತ್ತು. ತನ್ನ ಮುತ್ತಜ್ಜಂದಿರ ಕಾಲದ ಮನೆಯಲ್ಲಿ ಗಂಗಾರತ್ನನು
ತನ್ನ ಸಂಸಾರವನ್ನು ಸಾಕುತ್ತಿದ್ದನು. ಒಂದು ರೂಮು, ಹಾಗೂ ಅಡುಗೆ ಮನೆ ಅವರ ಸರ್ವಸ್ವವಾಗಿತ್ತು. ಚೊಕ್ಕಟವಾದ ಮನೆಯಲ್ಲಿ ಶಾಂತಿಯ ನಡೆ ನುಡಿ ಆಟಗಳು ಆ ಗೃಹಕ್ಕೆ ಹಿರಿದಾದ ಕಲೆಯನ್ನು ತರುತ್ತಿತ್ತು. ಏಕ ಪುತ್ರಿಯಾದ ಕಾರಣ ಅತೀ ಮುದ್ದಿನಿಂದ ಶಾಂತಿಯನು ಸಾಕಿದ್ಗರು .
ಶಾಂತಿಗೆ ಆರು ವರ್ಷವಾಯಿತು. ಒಂದನೆ ತರಗತಿಗೆ ಸೇರಿಸಲು ಗಂಗಾರತ್ನನು ಹಣವನ್ನು ಕೂಡಿಟ್ಟಿದ್ದನು.ಅದರಿಂದ ಅಲ್ಪ ಮೊತ್ತವನ್ನು ತೆಗೆದು ಶಾಂತಿಯನ್ನು ಶಾಲೆಗೆ ಸೇರಿಸಿದರು.
ಶಾಂತಿಗೆ ಹೆತ್ತವರ ಮುದ್ದು ಹೆಚ್ಚಾಗಿ ಕಲಿಯದೆ ಸದಾ ಆಟದಲ್ಲಿ ತಲ್ಲೀನಳಾಗಿದ್ದಳು.
ವರ್ಷಗಳು ಸಂದವು. ಶಾಂತಿ ೯ನೇ ತರಗತಿಗೆ ಕಾಲಿಟ್ಟಳು. ಆದರೆ ಅವಳು ಅಂದಿನಂತೆಯೆ ಆಟ ಆಡವ ಬದಲಾಗಿ ಕಥೆ ಪುಸ್ತಕಗಳು ವಾಚನಾಲಯದಿಂದ ತೆಗೆದು ಓದ ತೋಡಗಿದಳು. ಕಲಿಕೆಯಲ್ಲಿ ಶಾಂತಿಯು ಹಿಂದಿದ್ದಳು. ಆದರೆ ಶಾಂತಿಯು ಹೇಗೋ ೯ನೇ ತರಗತಿ ಪಾಸಾಗಿ ೧೦ನೇ ತರಗತಿ ತಲುಪಿದಳು. ಆದರೆ ಶಾಂತಿಯು ಅವಳ ಅಬ್ಯಾಸ ಬಿಡಲಿಲ್ಲ. ಗಂಗಾರತ್ನ ಹಾಗು ಕುಸುಮ ಶಾಂತಿಗೆ ಬುದ್ದಿವಾದ ಹೇಳುತಿದ್ದರು. ಆಗ ಅವಳು ಅದನ್ನು ಕಿವಿಗೊಡಲಿಲ್ಲ. ಯಾಕೆಂದರೆ ಅವಳಿಗೆ ಅದರ ಅಮೂಲ್ಯತ್ವ ತಿಳಿದಿರಲಿಲ್ಲ. ಹೇಗೋ ಅವಳು S S L C ತಲುಪಿದಳು. ದಂಪತಿಗಳು ಬುದ್ದಿ ಮಾತನ್ನು ಇನ್ನಷ್ಟು ಹೆಚ್ಚಿಸಿದರು. ಅದರಿಂದ ಏನೂ ಫಲ ದೊರೆಯಲಿಲ್ಲ. ಪರೀಕ್ಷೆ ಹತ್ತಿರ ತಲುಪಿದರೂ ನಿಶ್ಚಿಂತೆಯಿಂದಿದ್ದ ಶಾಂತಿಯು ಪರೀಕ್ಷೆಯಲ್ಲಿ ಅನುತ್ತಿರ್ಣಳಾದಳು.
ಗಂಗಾರತ್ನ ಕುಸುಮರಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ಶಾಂತಿಯ ಮುಂದಿನ ಭವಿಷ್ಯದ ಚಿಂತೆ ಇನ್ನಷ್ಟು ಹೆಚ್ಚಿತು. ಶಾಂತಿ ಹೇಗೋ ಮನೆಯಲ್ಲಿ ಕುಳಿತು ಕಾಲ ಕಳೆದಳು.
ಶಾಂತಿಗೆ ಮದುವೆ ವಯಸ್ಸು ತಲುಪಿತು. ಬಡವರಾದ ನಮ್ಮ ಮಗಳನ್ನು ಯಾರು ತಾನೆ ಮನೆ ಸೇರಿಸಿಯಾರು. ಎ೦ದು ಗಂಗಾರತ್ನನವರು ಚಿಂತೀಕೃತರಾದರು.
ಹೇಗೋ ಆ ಊರಿನಲ್ಲೆ ರಾಜೇಶ್ ಎ೦ಬ ಬೆಸ್ತನೊಂದಿಗೆ ಶಾಂತಿಯ ಮದುವೆಯಾಯಿತು. ಅವನ ಹೆತ್ತವರಿಗೂ ಅವನೊಬ್ಬನೆ ಮಗನಾದುದರಿಂದ ಅವರು ವರದಕ್ಷಿಣೆಯಾ
ಗಿ 1.5ಲಕ್ಷ ಕೇಳಿದರು. ದುಡ್ಡಿಗಿಂತ ತನ್ನ ಮಗಳ ಭವಿಷ್ಯ ದೋಡ್ಡದು ಎ೦ದು , ಸಾಲ ಮಾಡಿ , ವಸ್ತುಗ
ಳನ್ನೆಲ್ಲ ಅಡವಿಟ್ಟು ಪ್ರತಿ ಫಲವನ್ನೆಲ್ಲ ವರನ ಕಡೆಗೆ ಒಪ್ಪಿಸಿದರು.
ನಂತರದ ದಿನಗಳಲ್ಲಿ , ಇನ್ನು 50 ಸಾವಿರ ತರಲು ಶಾಂತಿಯನ್ನು ತವರಿಗಟ್ಟಿದರು. ಆದರೆ ಅದಕ್ಕೆ ಅವಳ ಮನಸ್ಸು ಒಪ್ಪಲಿಲ್ಲ. 'ಆಗ ತಾನೆ ನನ್ನ ಮದುವೆಗೆ ತುಂಬಾ ಖರ್ಚು ಮಾಡಿದ್ದಾರೆ.
ಇನ್ನು ಹಣ ಕೇಳಿದರೆ ಎಲ್ಲಿಂದ ತಾನೆ ಕೊಟ್ಟಾರು? ಎ೦ದು ಎರಡು ದಿನ ಅಲ್ಲೆ ನೆಲೆಸಿ ಗಂಡನ ಮನೆಗೆ ಹಿಂತಿರುಗಿದಳು. ಖಾಲಿ ಕೈಯಲ್ಲಿ ಬಂದ ಸೊಸೆಯನು ನೋಡಿ ಅತ್ತೆಯ ಸಿಟ್ಟು ನೆತ್ತಿಗೇರಿತು
''ಇನ್ನು ಒಂದು ತಿಂಗಳಲ್ಲಿ ಹಣ ತರದಿದ್ದಲ್ಲಿ ಇಲ್ಲೆ ಸುಟ್ಟು ಬೂದಿ ಮಾಡುತ್ತೇನೆ. '' ಎಂದು ಗದರಿಸಿದರು. ಈ ವಿಷಯದಲ್ಲಿ ಶಾಂತಿಯನ್ನು ದಿನ ನಿತ್ಯ ಹಿಂಸಿಸ ತೊಡಗಿದರು. ಅವಳ ಗಂಡನೂ
ತಾಯಿಯೊಂದಿಗೆ ಸೇರಿ ಮನ ಬಂದಂತೆ ಹೊಡೆದು ಬಡಿಯ ತೊಡಗಿದ. ಹೀಗಿದ್ದಾಗ ,..

ಒಂದು ದಿನ , ಶಾಂತಿಯು ಮಾಡಿದ ಪದಾರ್ಥದಲ್ಲಿ ಉಪ್ಪು ಕಡಿಮೆಯಾದ ಕಾರಣ
ಅವಳ ಗಂಡ ಹೊಡೆಯುತ್ತಿದ್ದಾಗ , ಗಂಗಾರತ್ನ ಕುಸುಮ ಅಲ್ಲಿಗೆ ಬಂದರು. ತನ್ನ ಮಗಳಿಗೆ ಆ
ಮನೆಯಲ್ಲಿ ಕೆಲಸದವಳಷ್ಟೂ ಗೌರವ ಸಿಗುವುದಿಲ್ಲ ಎ೦ದು ತಿಳಿದು ಬಂದವರೂ ಹಾಗೆ ತಿರುಗಿ
ಹೊದರು. ಅಳುವುದರಲ್ಲೆ ನಿರತಳಾಗಿದ್ದ ಶಾಂತಿಗೆ ತನ್ನ ಹತ್ತವರು ಬಂದುದೆ ತಿಳಿಯಲಿಲ್ಲ. ಅತ್ತ
ತನ್ನ ಮಗಳ ಸ್ಥಿತಿಯನ್ನು ಕಂಡು ಕೊರಗಿ ಕೊರಗಿ ನೇಣಿಗೆ ಶರಣಾದರು. ಹೆತ್ತವರು ಸತ್ತ ವಿಷಯ
ತಿಳಿದು ಶಾಂತಿಯು ಗರಬಡಿದಂತೆ ನಿಂತಳು. ತಾನು ಓದುವ ಸಮಯದಲ್ಲಿ ಓದದಿದ್ದ ಕಾರಣ
ತನ್ನ ತಂದೆ ತಾಯಿಗೆ ಈ ಪರಿಸ್ಥಿತಿ ಒದಗಿದೆ ಎ೦ದು ತನ್ನನ್ನು ತಾನೆ ಶಪಿಸಿದಳು. ಅವಳ ಕಣ್ಣಿಂದ
ಒಂದೊಂದು ಹನಿಯು ಉರುಳ ತೊಡಗಿತು. ಅತ್ತ ಹೆತ್ತವರ ಸಾವು , ಇತ್ತ ಹಿಂಸೆಯ ಬದುಕು,
ಅವಳಿಗೆ ಈ ಜೀವನವೇ ಬೇಡವೆನಿಸಿತು.
ದಿನಗಳು ಕಳೆದವು. ತನಗೆ ತಾನೆ ಸಮಾಧಾನ ಹೇಳುತ್ತಾ
ಮನೆ ಕೆಲಸಗಳನ್ನು ಮಾಡುತಿದ್ದಳು. ದಿನ ದಿನವು ಅವಳ ಮನಸ್ಸು '' ನೀನು ಸಾಯು ಇನ್ನು ಏಕೆ
ನಿನಗೆ ಈ ನಾಶ ಜನ್ಮ ''ಎ೦ದು ಶಪಿಸುತ್ತಿತ್ತು. ಆದರೆ ಅವಳಿಗೆ ಸಾಯಲು ಮನಸ್ಸಾಗಲ್ಲಿಲ್ವ. ತಾನೂ
ಸಂತೋಷದಲ್ಲಿ ಜೀವಿಸುವ ಸಂಧರ್ಭ ಎ೦ದಾದರೂ ಬಂದೇ ಬರುತ್ತದೆ ಎ೦ದು ಧೈರ್ಯ ತರುತ್ತದ್ದಳು. ಹೀಗೆ ಒಂದು ದಿನ, ಪುನಃ ೫೦ ಸಾವಿರದ ವಿಷಯ ಹೇಳಿ ಅವಳನ್ನು ಮನೆಯಿಂದ ಹೊರಗಟ್ಟಿದರು. ಎಲ್ಲಾದರೂ ಬದುಕ ಬೇಕಲ್ಲವೇ ? ಆದ್ದರಿಂದ ಅವಳು ತನ್ನ ತಾಯಿ ಮನೆಗೆ ಬಂದಳು. ಅ ಮನೆಯನ್ನು ಮಾರಿ ೫೦ ಸಾವಿರ ಅವರ ಮುಖಕ್ಕೆ ಎಸೆಯಬೇಕು ಎ೦ದು ಪರಿತಪಿಸುತ್ತಾ ಬ್ಯಾಂಕಿನತ್ತ ಹೆಜ್ಜೆ ಹಾಕಿದಳು. ಆದರೆ ಅಲ್ಲಿಂದ ಲಭಿಸಿದ ಉತ್ತರ ತಿಳಿದು ಅರೆ ಕ್ಷಣ
ಉಸಿರು ನಿಂತಂತೆ ನಿಂತು ಬಿಟ್ಟಳು. ''ಗಂಗಾರತ್ನ ರವರು ತಮ್ಮ ಮಗಳ ಮದುವೆಗೆ ಮನೆ ಮೇಲೆ ಗೃಹ ಸಾಲ ಪಡೆದು ಪುನಃ ೧.೫೦೦ ಲಕ್ಷ ಹಣ ಸಾಲ ಪಡೆದಿದ್ದಾರೆಂಬುದು ಅಲ್ಲಿಂದ ಲಭಿಸಿದ
ಉತ್ತರ. ಬ್ಯಾಂಕಿನಿಂದ ಮರು ಮಾತನಾಡದೆ ಹೊರಗಿಳಿದಳು. ಎಲ್ಲಿಗೋ ?ತಿಳಿಯದು. ಒಂದೊಂದೆ
ಭಾರವಾದ ಹೆಜ್ಜೆಯನ್ನಿಡುತ ಮುಂದೆ ಸಾಗಿದಳು ಶಾಂತಿ. ಥಟ್ಟನೆ ಉಪಾಯ ಹೊಳೆದಂತೆ ಅರೆ
ಕ್ಷಣ ನಿಂತು ಬಿಟ್ಟಳು. ''ಗಂಡನಿಗೆ ನಾ ಬೇಡವಾದರೆ ಅವರು ಕಟ್ಟಿದ ತಾಳಿ ಯಾಕೆ ? ಎ೦ದು ಅದನ್ನು ಮಾರಿ ಅನಾಥಾಶ್ರಮ ಸೇರಿದಳು. ಲಭಿಸಿದ ಹಣದಲ್ಲಿ ೧೦ ರೂಪಾಯಿಯನ್ನು ತನ್ನ ಹೆತ್ತವರ ನೆನಪಿಗಿರಿಸಿದಳು. ಆದರೆ ಅ ೧೦ ರೂಪಾಯಿಯನ್ನು ಯಾರ ಕೈಗೂ ಕೊಡುತಿರಲ್ಲ.ಎಲ್ಲೂ
ಇಡದೆ ಸದಾ ಕೈಯಲ್ಲೇ ಹಿಡಿದಿರುತ್ತಿದ್ದಳು.
ಹೀಗೆ ಒಂದು ದಿನ ಅನಾಥಾಶ್ರಮದ ಜಗಲಿಯಲ್ಲಿ ಕುಳಿತಿರುವಾಗ ಇದ್ದಕ್ಕಿದ್ದಂತೆ
ಒಬ್ಬ ''೫೦ ಲಕ್ಷ ಬಹುಮಾನ ಕೇವಲ ೧೦ರುಪಾಯಿ ಮಾತ್ರ''ಎ೦ದು ಹೇಳುತ್ತಾ ಲಾಟರಿಯವ
ಬರುತ್ತಿದ್ದ. ೫೦ ಲಕ್ಷ ಎ೦ದ ತಕ್ಷಣ ಅವಳ ಕಣ್ಣು ಅರಳಿತು. ತನ್ನ ತಂದೆ ತಾಯಿ ನೆನಪಿಗಿರಿಸಿದ ೧೦
ರುಪಾಯಿಯನ್ನು ತೆಗೆದು ಕೊಂಡು ಓಡಿ ಹೋಗಿ ಲಾಟರಿ ತೆಗೆದಳು.
ಅದೃಷ್ಟವೆಂಬಂತೆ ೫೦ಲಕ್ಷ ಅವಳದಾಯಿತು. ಹೆತ್ತವರ ಆರ್ಶಿವಾದವೋ ಏನೊ? ಅವಳು ಅದರಿಂದ ೫ ಲಕ್ಷ ಅನಾಥಾಶ್ರಮಕ್ಕೂ ಬಾಕಿ ಹಣದಿಂದ ಒಂದು ಸಣ್ಣ ಫ್ಯಾಕ್ಟ್ರಿ ಹಾಗೂ ಒಂದು ಮನೆ ಕಟ್ಟಿಸಿದಳು.
''ಅಮ್ಮಾವ್ರೇ ಮಳೆ ನಿಂತೈತೆ. ನಾ ಮನ್ಗೆ ಓಗ್ತಿನಿ''ಎ೦ದು ಕೆಲಸದಾಕೆ ನುಡಿದಾಗ ಶಾಂತಿ ನೆನಪಿನ ದೋಣಿಯಿಂದ ಇಳಿದಳು. ಮಳೆ ನಿಂತ್ತಿತ್ತು. ಮರಗಳಿಂದ ಬೀಳುವ ಹನಿಗಳು ಚಟಪಟ ಎನ್ನುತ್ತಿತ್ತು. ಶಾಂತಿ ಎಚ್ಚೆತ್ತು ''ಇಲ್ಲೇ ಇರು ನಾಳೆ ಹೋಗುವಿಯಂತೆ''' ಎಂದಳು . ಅದಕ್ಕೆ ಕೆಲಸದಾಕೆ ''no thanks''ಎಂದಳು . ''ಅರೆರೆ ನೀನು ಯಾವಾಗ ಇಂಗ್ಲೀಷ್ ಕಲಿತೆ ?'' ''ಅದಾ? ನನ್ ದೊಡ್ಮಗ ಅಷ್ಟು ಇಷ್ಟು ದಿನಕ್ಕೋಮ್ಮೆ ಕಲಿಸ್ತಾನೆ '' ಎಂದು ನಾಚಿಕೆಯಿಂದ ಒಳಗೋಡಿದಳು. ಶಾಂತಿಯು ಅವಳ ಹಿಂದೆ ಭಾರವಾದ ಹೆಜ್ಜೆಗಳನ್ನಿಟ್ಟು ಮುನ್ನಡೆದಳು.



ಲೇಖನ : ಅಕ್ಷತ 9 ಎ ತರಗತಿ
ಒಗ್ಗಟ್ಟಿನಲ್ಲಿ ಬಲವಿದೆ

''ಒಗ್ಗಟ್ಟೇ ಬಲ'' ಎ೦ಬ ಕಿರಿಯ ಸೊಲ್ಲವೂ ಇದೆ.'' ಕೂಡಿ ಬಾಳಿದರೆ ಸ್ವರ್ಗ'' ಎ೦ಬುದು ಸಹಿತ ಇದಕ್ಕೆ ಪೂರಕವಾದ ಗಾದೆಯಾಗಿದೆ. ಸಾಗರದಲ್ಲಿ ಒಂದು ಹನಿ ನೀರಿಗೂ ಸಾಗರದಷ್ಟೆ ಶಕ್ತಿಯಿದೆ.ಅದನ್ನು ಸಾಗರದಿಂದ ಬೇರ್ಪಡಿಸಿದಾಗ ಯಾವ ಶಕ್ತಿಯೂ ಇಲ್ಲ.ಸೂರ್ಯ ಶಾಖವೇ ಅದನ್ನು ನುಂಗಿ ಬಿಡಬಹುದು.ಮಣ್ಣು ಅದನ್ನು ಕುಡಿಯಬಹುದು.ಇದೇ ರೀತಿ ಸಾಮಾಜಿಕ ಬದುಕಿನಲ್ಲಿಯೂ ವ್ಯಕ್ತಿಗಳು ಒಟ್ಟಾಗಿ ನಡೆದರೆ ಎಲ್ಲವನ್ನು ಸಾಧಿಸಲು ಸಾಧ್ಯ.ಬಿಡಿಯಾದರೆ ಇಡಿಯಾಗಿ ನಾಶವನ್ನು ಹೊಂದುತ್ತವೆ.

ಮುದುಕನೊಬ್ಬನು ಸಾಯುವ ವೇಳೆಯಲ್ಲಿ ಸದಾ ಜಗಳವಾಡುವ ತನ್ನ ನಾಲ್ಕು ಮಕ್ಕಳಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎ೦ಬುದನ್ನು ಚೆನ್ನಾಗಿ ತೋರಿಸಿಕೊಟ್ಟನು.ನಾಲ್ವರಿಗೆ ಎರಡೆರಡು ಕಿರುಗೋಲುಗಳನ್ನು ತರಲು ಹೇಳಿದನು. ಪ್ರತಿಯೊಬ್ಬರಲ್ಲಿ ಒಂದೊ೦ದು ಮುರಿಯಲು ಹೇಳಿದನು.ಎಲ್ಲರೂ ಬಿಡಿಬಿಡಿಯಾಗಿ ಮುರಿದರು.ಉಳಿದ ನಾಲ್ವರು ಕೋಲುಗಳನ್ನು ಒಟ್ಟು ಮಾಡಿ ದಾರದಿಂದ ಕಟ್ಟಲು ಹೇಳಿದನು.ಒಬ್ಬೊಬ್ಬರಿಂದ ಮುರಿಯ ಹೇಳಿದನು.ನಾಲ್ಕು ಕೋಲನ್ನು ಒಟ್ಟಾಗಿ ಒಬ್ಬರಿಂದಲೂ ಮುರಿಯಲಾಗಲಿಲ್ಲ.ನಂತರ ನಾಲ್ಕು ಜನರು ಒಟ್ಟಾಗಿ ಮುರಿಯಿರಿ ಎ೦ದಾಗ ಎಲ್ಲರೂ ಕೂಡಿ ಮುರಿದರು.ಈ ಸರಳ ಅನುಭವದಿಂದ ಒಗ್ಗಟ್ಟಿನ ಮಹತ್ವವನ್ನು ತಿಳಿಸಿಕೊಟ್ಟನು. ಒಗ್ಗಟ್ಟಿನಲ್ಲಿ ಬಾಳಿದರೆ ಅನ್ಯರು ನಮ್ಮನ್ನು ಎದುರಿಸಲಾರರು. ಒಗ್ಗಟ್ಟಿನಲ್ಲಿ ಸುಖವಿದೆ, ಹಿತವಿದೆ. ದೇಶವನ್ನು ಒಗ್ಗಟ್ಟಿನಲ್ಲಿ ಮುನ್ನಡೆಸಬೇಕು.










ಗಾದೆ ಸಂಗ್ರಹ ಕಿರಣ್ ರಾಜ್
ಕಾಯಕವೇ ಕೈಲಾಸ
ದುಡಿಮೆಯೆ ದೇವರು
ಇಂದು ಕಲಿ ನಾಳೆ ನಲಿ
ಬೆಳೆಯ ಸಿರಿ ಮೊಳಕೆಯಲಿ










       



 ಕವನ:  ಭಾಗ್ಯಲಕ್ಷ್ಮಿ 9    ಎ 
ಕೃಷಿಯಿಂದ ಜೀವನ ಪಾವನ

ಕೃಷಿಕನೇ ದೇಶದ ಬೆನ್ನೆಲುಬು
ಅವನಿಂದಲೇ ನಮ್ಮ ಜೀವನವು
ಬಿಸಿಲನು ಸಹಿಸಿ ಬೆವರನು ಸುರಿಸಿ
ಮಾಡುವ ಕಾರ್ಯವು ಪಾವನವು
ರೈತನು ದುಡಿದು ಕೃಷಿಯನು ಮಾಡಿ
ಜನತೆಗೆ ಮಾಡುವ ಉಪಕಾರ
ಹೊಲದಲಿ ಕಷ್ಟವ ಪಡುತಲಿ ರೈತನು
ದೇಶದ ಅನ್ನಕೆ ಆಧಾರ
ಹಗಳಿರುಳೆನ್ನದೆ ದುಡಿಯುವ ರೈತನು
ಉತ್ತಮ ಬೆಳೆಯನು ಬೆಳೆಸುವನು
ಕಷ್ಟವ ಸಹಿಸಿ ಕೃಷಿಯನು ಮಾಡಿ
ಫಲವನು ಜನರಿಗೆ ಉಣಿಸುವನು

 -------------------------------------------------------------------
ಕಥೆ  :  ಅಕ್ಷತ .ರೈ .ಎಮ್
           ಕೋಳಿ ಮತ್ತು ಗಿಳಿ 
ಒಂದೂರಿನಲ್ಲಿ ರಾಮಯ್ಯ ಎ೦ಬವನು ವಾಸವಾಗಿದ್ದನು. ಅವನು ಒಂದು ಕೋಳಿ ಮತ್ತು ಗಿಳಿಯನ್ನು ಸಾಕುತ್ತಿದ್ದನು.ಅವನು ಕೋಳಿಯನ್ನು ಮಾತ್ರ ಹೊರಗೆ ಬಿಡುತ್ತಿದ್ದ ಗಿಳಿಯನ್ನು ಪಂಜರದಲ್ಲೇ ಕೂಡಿಹಾಕಿದ್ದ.ಕೋಳಿಗೆ ಜಂಭ ಹೆಚ್ಚಿತು.ತಾನು ಬಹಳ ಅದೃಷ್ಟಶಾಲಿ ಎ೦ದು ಅದು ಬೀಗುತ್ತಿತ್ತು.ಗಿಳಿಗೆ ಬಹಳ ದು:ಖವಾಗುತ್ತಿತ್ತು. ಗಿಳಿಯು ಹೇಗಾದರೂ ಈ ಪಂಜರದಿಂದ ತಪ್ಪಿಸಿಕೊಂಡು ಹೋಗಬೇಕು ನಾನೂ ಅದರಂತೆ ಹೊರಗಡೆ ಹಾರಾಡುತ್ತಾ,ಆಟವಾಡುತ್ತಾ ಖುಷಿಪಡೂಬೇಕು ಎ೦ದೆಲ್ಲಾ ಕನಸು ಕಾಣುತ್ತಿತ್ತು.ಹಾಗೆಯೇ ಸರಿಯಾದ ಅವಕಾಶಕ್ಕಾಗಿ ಕಾಯುತ್ತಿತ್ತು.ಒಂದುದಿನ ರಾಮಯ್ಯ ಪಂಜರದ ಬಾಗಿಲು ತೆರೆದು ಗಿಳಿಗೆ ಆಹಾರ ನೀಡುತ್ತಿದ್ದ.ಅದೇ ವೇಳೆಗೆ ಕೋಳಿ ಯಾಕೋ ಕಿರುಚಿಕೊಂಡಿತು.ತನ್ನ ಕೋಳಿಗೆ ಏನಾಯಿತೋ ಎ೦ಬ ಭಯದಲ್ಲಿ ರಾಮಯ್ಯ ಕೂಡಲೇ ಅಂಗಳದತ್ತ ಓಡಿದ.ಆದರೆ ಅವಸರದಲ್ಲಿ ಅವನು ಗಿಳಿಯ ಪಂಜರದ ಬಾಗಿಲನ್ನು ಹಾಕಿರಲೇ ಇಲ್ಲ. ಗಿಳಿ ತಕ್ಷಣವೇ ಪಂಜರದಿಂದ ಹೊರಬಂದು ದೂರ ಹಾರಿ ಬಿಟ್ಟಿತು.ನಂತರ ರಾಮಯ್ಯ ಪಂಜರದತ್ತ ಬಂದು ನೋಡಿದ.ಆದರೆ ಪಂಜರದಲ್ಲಿ ಗಿಳಿಯೇ ಇರಲಿಲ್ಲ.ನಂತರ ಅವನಿಗೆ ಅವನು ಮಾಡಿದ ತಪ್ಪಿನ ಅ ರಿವಾಯಿತು.

-----------------------------------------------------------------

ಕವನ:    ಆಯಿಷ .ಬಿ   ೯ ಎ ತರಗತಿ
ದೀಪಾವಳಿ
ತನು ಮನ ನಯಗಳಲ್ಲಿ
ಹರಿದಾಡುತಿದೆ ಆನಂದ ನೋಡು........
ಬೆಳಕಿನಿಂದ ಇರುಳನ್ನು
ಮರೆ ಮಾಚುತಿದೆ ದೀಪಾವಳಿ ಹಾಡು ….....
ಗಗನದಲ್ಲಿ ಮುಗಿಲಂಚಿನಲ್ಲಿ
ಅದೆಷ್ಟೋ ಬಣ್ಣಗಳು........
ಸುಂದರ ಪ್ರಕೃತಿ ಮರೆಮಾಚುತಿದೆ
ಹಣತೆಯ ದೀಪಗಳು........
ಪಟಾಕಿ ಸಿಡಿಸುತ
ಸಂಭ್ರಮದಿಂದಿರುತ
ಆಚರಿಸುವ ದೀಪಾವಳಿ..........
----------------------------------------------------------------------------------------------------------------------------------
ನಗೆ ಹನಿ  :  ನಿಖಿಲ್ ಪಿ  6

ಗುಂಡ: ನೀನು ಅಮೇರಿಕದವನೇ?
ವಿದೇಶಿಯ:ಅಲ್ಲ ನಾನು ಚೀನದವನು.
ಗುಂಡ:ಅಲ್ಲ ನೀನು ಅಮೇರಿಕದವನೇ?
ವಿದೇಶಿಯ: ಸರಿಯಪ್ಪ ನಾನು ಅಮೇರಿಕದವನು.
ಗುಂಡ:ಮತ್ಯಾಕೆ ನೀನು ಚೈನಾದವನ ತರ ಇದ್ದಿ ?

  __________________________________________________-
ಲೇಖನ:ನಿಶಿತ . ಪಿ  9ಎ
ಸೂರ್ಯಕಾಂತಿ
ಸೂರ್ಯಕಾಂತಿ ಬೀಜಗಳಿಂದ ಎಣ್ಣೆ ತೆಗೆಯುತ್ತಾರೆ. ಇದರ ಎಣ್ಣೆಯನ್ನು ಹಲವಾರು ವಿ ಆಧಾರದಲ್ಲಳೆ ಧಗಳಲ್ಲಿ ತೆಂಗಿನ ಎಣ್ಣೆ , ನೆಲಕಡಲೆ ಎಣ್ಣೆಯಂತೆ ಉಪಯೋಗಿಸುತ್ತಾರೆ. ಇತ್ತೀಚೆಗೆ ಈ ಎಣ್ಣೆಯ ಬಳಕೆ ಹೆಚ್ಚುತ್ತಿದೆ.ಬಿತ್ತನೆ ಮಾಡಿ ತೊಂಭತ್ತರಿಂದ ನೂರು ದಿನಗಳಲ್ಲಿ ಬೆಳೆ ಸಿಗುತ್ತದೆ. ಇದನ್ನು ನೀರಾವರಿ ಮಾಡಿಯೂ , ಮಳೆ ಆಧಾರದಲ್ಲಿ ಬೆಳೆಸುತ್ತಾರೆ. ಸಾಮಾನ್ಯ ಇಳಿಜಾರು ಪ್ರದೇಶಗಳಲ್ಲಿ ಇದು ಹುಲುಸಾಗಿ ಬೆಳೆಯುದಾಗಿದೆ. ಹಿಂಗಾರು ಬೆಳೆಯಾಗಿ ಅಕ್ಟೋಬರ್ , ನವಂಬರ್ ತಿಂಗಳಲ್ಲಿ ಬಿತ್ತನೆ ಮಾಡುತ್ತಾರೆ. ಈ ಬೆಳೆಯನ್ನು ಮಾಡುವ ಜಾಗಕ್ಕೆ ಸಾಕಷ್ಟು ಗೊಬ್ಬರವನ್ನು ಹರಡಿ , ಎರಡು ಮೂರು ಸಲ ಉಳುಮೆ ಮಾಡುತ್ತಾರೆ. ಹದಿನೈದು ದಿನ ಸರಿಯಾಗಿ ಬೆಳೆದು ಬಂದ ಗಿಡಗಳನ್ನು ಉಳಿಸಿ ಮಿಕ್ಕವುಗಳನ್ನು ಕಿತ್ತು ತೆಗೆಯುತ್ತಾರೆ. ಗಿಡಗಳು ಬೆಳೆದಂತೆ ಬುಡಗಳ ಸುತ್ತಲು ಬೆಳೆದು ಬರುವ ಕಳೆ ತೆಗೆದು ರಸಗೊಬ್ಬರ ಹರಡಿ ಬುಡಗಳಿಗೆ ಎರಡು ಮೂರು ಸಲ ಮಣ್ಣು ಏರು ಹಾಕುತ್ತಾರೆ. ಮಣ್ಣ ಹಾಕಿದರೆ, ಗಿಡಗಳ ತುದಿಯಲ್ಲಿ ಹೂ ಬಿಟ್ಟು ಕಾಯಿಗಳಾಗುವಾಗ ಭಾರವಾಗಿ ವಾಲಿ ಅಡ್ಡ ಬೀಳದೆ ನೇರವಾಗಿ ನಿಲ್ಲಲು ಸಹಾಕವಾಗುವುದು. ಅರಳಿದಾಗ ಸೂರ್ಯನಂತೆ ಕಂಗೊಳಿಸುದು  ಹೂವಿನ ಮಧ್ಯಭಾಗ ಗುಂಡಾಗಿದ್ದು ನಾಲ್ಕೈದು ಇಂಚು ವ್ಯಾಸಕ್ಕೆ ಕುಸುಮವಿರುತ್ತದೆ. ಮುಂದೆ ಪರಾಗಸ್ಪರ್ಶದ ಅನಂತರ ಈ ಕುಸುಮ ಭಾಗದಲ್ಲಿ ಬೀಜಗಳಾಗುತ್ತದೆ. ಬೀಜ ಬೆಳೆದು ಒಣಗಿದಾಗ ಕಂದು ಬಣ್ಣ ಬರುತ್ತದೆ. ಬೀಜವನ್ನು ಮಾರುಕಟ್ಟೆಗೆ ಕಳುಹಿಸತ್ತಾರೆ.ನೀರಾವರಿ ಮಾಡಿ ಬೆಳೆಸಿದಾಗ ಒಂದು ಎಕರೆಗೆ ಎ೦ಟದಿಂದ ಹತ್ತು ಕ್ವಿಂಟಾಲು ಬೆಳೆ ಬರುತ್ತದೆ. ಮಳೆ ಆಧಾರದಲ್ಲಿ ಬೆಳೆಸಿದಾಗ ನಾಲ್ಕರಿಂದ-ಆರು ಕ್ವಿಂಟಲಿನವರೆಗೆ ಸಿಗುತ್ತದೆ.