ಚಾಂದ್ರಯಾನ
ದಿನ
ಪೈವಳಿಕೆನಗರ:
ಚಾಂದ್ರ
ದಿನವನ್ನು ಪೈವಳಿಕೆನಗರ ಶಾಲೆಯಲ್ಲಿ
ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ ಕೆ.
ಶ್ರೀನಿವಾಸರವರು
ಉದ್ಘಾಟಿಸಿದರು.
ಕೃಷ್ಣಮೂರ್ತಿ
ಮಾಸ್ಟರ್ ಪ್ರಾಸ್ತಾವಿಕವಾಗಿ
ಮಾತನಾಡಿದರು.
ಸಂತೋಷ್
ಮಾಸ್ಟರ್ ಶುಭಹಾರೈಸಿದರು.
ಶ್ರೀಧರ
ಭಟ್ ಕಾರ್ಯಕ್ರಮದ ಕುರಿತು
ವಿವರಿಸಿದರು.
ಶಿಕ್ಷಕರಾದ
ಪ್ರಶಾಂತ್ ಕುಮಾರ್ ಅಮ್ಮೇರಿ,
ಅಬ್ದುಲ್
ಕರೀಂ .ಪಿ.ಕೆ.
ರೇಖಾ
ಟೀಚರ್ ಉಪಸ್ಥಿತರಿದ್ದರು.
ಯುಪಿ
ಸಭಾಂಗಣದಲ್ಲಿ ಚಾರ್ಟು ಪ್ರದರ್ಶನ
ಏರ್ಪಡಿಸಲಾಗಿತ್ತು.
ಚಾಂದ್ರದಿನದ
ಬಗ್ಗೆ ರಸಪ್ರಶ್ನೆ ಏರ್ಪಡಿಸಲಾಗಿತ್ತು.
ಯುಪಿ
ವಿಭಾಗದಲ್ಲಿ 7ನೇ
ತರಗತಿಯ ಪ್ರಜ್ಞಾ,
ಹೈಸ್ಕೂಲ್
ವಿಭಾಗದಲ್ಲಿ 10ನೇ
ತರಗತಿಯ ನಿತಿನ್ ಕೃಷ್ಣ ಪ್ರಥಮ
ಸ್ಥಾನಗಳಿಸಿದರು.7ನೇ
ತರಗತಿಯ ಧ್ವಾನಿಷ್ ಸ್ವಾಗತಿಸಿ
7ನೇ
ತರಗತಿಯ ಅಕ್ಷತಾ ವಂದಿಸಿದರು.
7ನೇ
ತರಗತಿಯ ಕಾರ್ತಿಕ್ ಕಾರ್ಯಕ್ರಮ
ನಡೆಸಿಕೊಟ್ಟರು.
ವಿಶ್ವ ಜನಸಂಖ್ಯಾ ದಿನ
ಜುಲೈ
11ರಂದು
ಪೈವಳಿಕೆನಗರ ಶಾಲೆಯಲ್ಲಿ ವಿಶ್ವ
ಜನಸಂಖ್ಯಾ ದಿನವನ್ನು ಆಚರಿಸಲಾಯಿತು.
ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀ
ಕೆ.
ಶ್ರೀನಿವಾಸರವರು
ಉದ್ಘಾಟನೆ ಮಾಡುವುದರೊಂದಿಗೆ
ಸಭೆ ಆರಂಭವಾಯಿತು.
ಶಾಲಾ
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ
ಶ್ರೀ ಲೋರೆನ್ಸ್ ಡಿಸೋಝರವರು
ಎಲ್ಲಾ ಕ್ಲಬ್ ಗಳ ಉದ್ಘಾಟನೆಯನ್ನು
ವಿದ್ಯುಕ್ತವಾಗಿ ನೆರವೇರಿಸಿದರು.
ಶ್ರೀ
ಕೃಷ್ಣಮೂರ್ತಿ ಸರ್ ಶುಭಾಶಂಸನೆಗೈದರು.ಸಭೆಗೆ
6ರಿಂದ
8ನೇ
ತರಗತಿಯ ಎಲ್ಲಾ ಕ್ಲಬ್ ಗಳ ಸದಸ್ಯರು
ಭಾಗವಹಿಸಿದ್ದರು.
ಮಧ್ಯಾಹ್ನ
ಜನಸಂಖ್ಯೆಯ ಅಂಕಿ ಅಂಶಗಳ ಬಗ್ಗೆ
ಡಿವಿಡಿ ಪ್ರದರ್ಶನ ಮತ್ತು ಚರ್ಚೆ
ನಡೆಯಿತು.
ಮಧ್ಯಾಹ್ನ
ಭೋಜನ ವಿರಾಮದ ನಂತರ 2ಗಂಟೆಗೆ
ಸರಿಯಾಗಿ ರಸಪ್ರಶ್ನೆ ನಡೆಯಿತು.ನಂತರ
ಜನಗಣತಿಯ ಅಂಕಿ ಅಂಶಗಳ ಚರ್ಚೆ
ನಡೆಯಿತು.
ಅಪರಾಹ್ನ
3ಗಂಟೆಗೆ
ಸರಿಯಾಗಿ ಪ್ರೋಜೆಕ್ಟ್ ಇನ್
ರಿಲೇಶನ್ ಟು ಸೆನ್ ಸಸ್ 2011
ಎಂಬ
ಕಾರ್ಯಕ್ರಮ ಜರಗಿತು.
ಜನಸಂಖ್ಯಾ
ರಸಪ್ರಶ್ನೆಯಲ್ಲಿ 7
ಎ
ತರಗತಿಯ ಪ್ರಜ್ಞಾ ಪ್ರಥಮ
ಸ್ಥಾನ ಹಾಗೂ 7ಸಿ
ಯ ಧ್ವಾನಿಶ್ ದ್ವಿತೀಯ ಸ್ಥಾನ
ಗಳಿಸಿದರು.
ಎಲ್ಲಾ
ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಶಾಂತ್
ಸರ್ ಕಾರ್ಯಕ್ರಮಕ್ಕೆ ಆಗಮಿಸಿದ
ಎಲ್ಲರನ್ನೂ ಸ್ವಾಗತಿಸಿದರು.
ಸಮಾಜ
ವಿಜ್ಞಾನದ ಶ್ಯಾಮಲಾ ಟೀಚರ್
ಜನಸಂಖ್ಯೆಯ ಬಗ್ಗೆ ಸ್ವರಚಿತ
ಕವನವನ್ನು ಹಾಡಿ ವಂದನಾರ್ಪಣೆಗೈದರು.
ಶ್ರೀಧರ
ಮಾಸ್ಟರ್ ನಿರೂಪಿಸಿದರು.
No comments:
Post a Comment