ಮಂಜೇಶ್ವರ ಉಪಜಿಲ್ಲಾ ವಿಜ್ಞಾನ, ಸಮಾಜವಿಜ್ಞಾನ, ಗಣಿತ, ಐಟಿ, ವೃತ್ತಿಪರಿಚಯ ಮೇಳ
ಮಂಜೇಶ್ವರ ಉಪಜಿಲ್ಲಾ ವಿಜ್ಞಾನ, ಸಮಾಜವಿಜ್ಞಾನ, ಗಣಿತ, ಐಟಿ, ವೃತ್ತಿಪರಿಚಯ ಮೇಳವು ನವಂಬರ್ 6ರಂದು ಜಿ.ಎಚ್.ಎಸ್.ಎಸ್. ಪೈವಳಿಕೆನಗರದಲ್ಲಿ ಜರಗಿತು. ಮಂಜೇಶ್ವರ ಶಾಸಕ ಶ್ರೀ ಪಿ.ಬಿ.ಆಬ್ದುಲ್ ರಸಾಕ್ ಉದ್ಘಾಟಿಸಿದರು.ಮಂಜೇಶ್ವರ ಬ್ಲೋಕ್ ಪಂಚಾಯ್ ಉಪಾಧ್ಯಕ್ಷ ಶ್ರೀ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಪಿ.ಟಿ.ಎ. ಅಧ್ಯಕ್ಷ ಶ್ರೀ ಪಿ.ಕೆ.ಮುಸ್ತಾಫ ಧ್ವಜಾರೋಹಣಗೈದರು.ಜಿಲ್ಲಾ ಪಂಚಾಯತ್ ವೆಲ್ ಫೇರ್ ಸ್ಟೇಂಡಿಂಗ್ ಕಮಿಟಿ ಚೆಯರ್ ಮ್ಯಾನ್ ಶ್ರೀಮತಿ ಮಮತಾ ದಿವಾಕರ್, ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಶಂಕರ ರೈ ಮಾಸ್ಟರ್ ಮುಖ್ಯ ಅತಿಥಿಗಳಾಗಿದ್ದರು. ಪೈವಳಿಕೆ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ದಿನೇಶ್ವರಿ ನಾಗೇಶ್, ಪೈವಳಿಕೆ ಪಂಚಾಯತ್ ಸ್ಟೇಂಡಿಂಗ್ ಕಮಿಟಿ ಚೆಯರ್ ಮ್ಯಾನ್ ಆಬ್ದುಲ್ ರಸಾಕ್ ಚಿಪ್ಪಾರು, ಎಜುಕೇಶನ್ ಸ್ಟೇಂಡಿಂಗ್ ಕಮಿಟಿ ಚೆಯರ್ ಮ್ಯಾನ್ ಶ್ರೀ ದೇವು ಮೂಲ್ಯ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಬೇಬಿ ಶೆಟ್ಟಿ.ಕೆ, ಪಂಚಾಯತ್ ಸದಸ್ಯ ಅಂದು ಹಾಜಿ ಶುಭಾಶಂಸನೆಗೈದರು. ಮಂಜೇಶ್ವರ ವಿದ್ಯಾಧಿಕಾರಿ ಸದಾಶಿವ ನಾಯಕ್.ಎನ್ ಸ್ವಾಗತಿಸಿ, ಪ್ರಾಂಶುಪಾಲ ಎ.ಎಮ್ ಮಾಣಿ ವಂದಿಸಿದರು. ಸತೀಶ್ ಕುಮಾರ್ ಶೆಟ್ಟಿ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ಪೈವಳಿಕೆ ಪಂಚಾಯತ್ ಅಧ್ಯಕ್ಷ ಶ್ರೀ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯತ್ ಸದಸ್ಯ ಎ.ಕೆ.ಎಮ್. ಅಶ್ರಫ್, ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಸುಜಾತಾ ಬಿ.ರೈ,ಪೈವಳಿಕೆ ಪಂಚಾಯತ್ ವೆಲ್ ಫೇರ್ ಸ್ಟೇಂಡಿಂಗ್ ಕಮಿಟಿ ಚೇರ್ ಪರ್ಸನ್ ಶ್ರೀಮತಿ ಪುಷ್ಪಲಕ್ಷ್ಮಿ, ಎನ್., ವಾರ್ಡ್ ಸದಸ್ಯೆ ಕುಞ್ಞಾಲಿಮ್ಮ, ಅಂದು ಹಾಜಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಸ್ವಾಗತಿಸಿ, ಸ್ವಾಗತ ಸಮಿತಿ ಸಂಚಾಲಕ ಅಹಮ್ಮದ್ ಹುಸೈನ್ ವಂದಿಸಿದರು. ಕೃಷ್ಣಮೂರ್ತಿ. ಎಂ.ಎಸ್. ನಿರೂಪಿಸಿದರು.
No comments:
Post a Comment